• ಸ್ವಸಹಾಯ

ಡಿಸ್‌‌ಕನೆಕ್ಷನ್ ಮತ್ತು ರಿಸ್ಟೋರೇಶನ್

ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವುದು/ನಿಷ್ಕ್ರಿಯಗೊಳಿಸುವುದು ಮತ್ತು ಮರು-ಆರಂಭಿಸುವುದು -

i. ಯಾವುದೇ ಒಬ್ಬ ಸಬ್‍ಸ್ಕ್ರೈಬರ್‌ ತನ್ನ ಸಬ್‍ಸ್ಕ್ರಿಪ್ಷನ್ ಸಕ್ರಿಯವಾಗಿರುವಾಗ ಮಾತ್ರ ತಾತ್ಕಾಲಿಕ ನಿಷ್ಕ್ರಿಯಗೊಳಿಸುವಿಕೆ ಸೇವೆಯನ್ನು ಪಡೆಯಬಹುದು.
ii. ಸಬ್‌ಸ್ಕ್ರೈಬರ್ ತಾತ್ಕಾಲಿಕ ನಿಷ್ಕ್ರಿಯಗೊಳಿಸುವಿಕೆಯನ್ನು ಆಯ್ಕೆ ಮಾಡುವ ಅವಧಿ ಕನಿಷ್ಠ 15 ದಿನಗಳು ಮತ್ತು ಅದರ ಮಲ್ಟಿಪಲ್‌ ಆಗಿರುತ್ತದೆ.
iii. ಚೈಲ್ಡ್‌ ಕನೆಕ್ಷನ್‌ಗಾಗಿ ಸಬ್‍ಸ್ಕ್ರೈಬರ್‌ ತಾತ್ಕಾಲಿಕ ಮರುಸಕ್ರಿಯಗೊಳಿಸುವಿಕೆ ನೀತಿಯನ್ನು ವೈಯಕ್ತಿಕವಾಗಿ ಪಡೆದುಕೊಳ್ಳಬಹುದು. ಆದಾಗ್ಯೂ, ಪೇರೆಂಟ್‌ ಕನೆಕ್ಷನ್‌ಗಾಗಿ ಸಬ್‍ಸ್ಕ್ರೈಬರ್‌ ಅದೇ ಪ್ರಯೋಜನ ಪಡೆಯಲು ಬಯಸಿದರೆ, ಆಗ ಎಲ್ಲಾ ಕನೆಕ್ಷನ್‌ಗಳಿಗೆ ಅದು ಲಭ್ಯವಾಗುವಂತೆ ಮಾಡಬೇಕು.
iv. ಸಬ್‍ಸ್ಕ್ರೈಬರ್‌ ತಾನು ಬಯಸಿದಷ್ಟು ಬಾರಿ ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸುವುದನ್ನು ಪಡೆದುಕೊಳ್ಳಬಹುದು
v. ಪುನಃ ಸಕ್ರಿಯಗೊಳಿಸುವಿಕೆಗಾಗಿ, ಸಬ್‍ಸ್ಕ್ರೈಬರ್‌ ಈ ಕೆಳಗಿನವುಗಳಿಗೆ ಪಾವತಿಸಬೇಕಾಗುತ್ತದೆ:
ಎ. 3 ತಿಂಗಳು ಮೀರದ ಅವಧಿಯವರೆಗೆ ಇಂತಹ ಸೇವೆಗಳನ್ನು ನಿರಂತರವಾಗಿ ಅಮಾನತುಗೊಳಿಸಿದಲ್ಲಿ ₹ 25 ಅನ್ನು ಮರು ಸಕ್ರಿಯಗೊಳಿಸುವಿಕೆ ಶುಲ್ಕವಾಗಿ ಪಡೆಯಲಾಗುತ್ತದೆ.
ಬಿ. 3 ತಿಂಗಳು ಮೀರಿದ ಅವಧಿಯವರೆಗೆ ಇಂತಹ ಸೇವೆಗಳನ್ನು ನಿರಂತರವಾಗಿ ಅಮಾನತುಗೊಳಿಸಿದರೆ ಮರು-ಸಕ್ರಿಯಗೊಳಿಸಲು ಪಡೆಯಲಾಗುವ ಶುಲ್ಕ ₹ 100.