• ಸ್ವಸಹಾಯ

ಅಭ್ಯಾಸದ ಮಾನ್ಯುಯಲ್‌

1 ಟೆಲಿವಿಷನ್ ಚಾನೆಲ್ಲಿನ ವಿತರಕರ ಹೆಸರು ಮತ್ತು ವಿಳಾಸ:

Dish TV India Limited,
Registered Office: Office No. 3/B, 3rd Floor, Goldline Business Centre, Link Road, Malad West, Mumbai 400064, Maharashtra
Corporate Office: FC-19, Film City, Sector 16 A, Noida, 201301

2 ಟಿವಿ ಚಾನೆಲ್ ವಿತರಕರು ನೀಡುವ ಸೇವೆಯ ನಿಯಮ ಮತ್ತು ಷರತ್ತುಗಳು: ಇಲ್ಲಿ ಕ್ಲಿಕ್ ಮಾಡಿ

3 ನೋಡಲ್ ಅಧಿಕಾರಿಯ ಹೆಸರು, ಹುದ್ದೆ ಮತ್ತು ಇಮೇಲ್, ಸಂಪರ್ಕ ದೂರವಾಣಿ ಸಂಖ್ಯೆ, ಫ್ಯಾಕ್ಸ್ ಸಂಖ್ಯೆ ಮತ್ತು ವಿಳಾಸ: ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

4 ಈ ನಿಯಮಾವಳಿಗಳಲ್ಲಿ ನಿರ್ದಿಷ್ಟಪಡಿಸಿದಂತೆ ಗ್ರಾಹಕ ರಕ್ಷಣೆಯ ನಿಬಂಧನೆಗಳ ವಿವರಗಳು:-
 

ಎ. ಟೆಲಿವಿಷನ್ನಿಗೆ ಸಂಬಂಧಿಸಿದ ಪ್ರಸಾರ ಸೇವೆಗಳ ಅಡ್ಡಿ.— ಸಬ್‌ಸ್ಕ್ರೈಬರ್‌ಗೆ ನೀಡಲಾದ ಟೆಲಿವಿಷನ್ ಚಾನೆಲ್‌ಗಳ ಸಿಗ್ನಲ್‌ ಸತತವಾಗಿ 72 ಗಂಟೆಗಳನ್ನು ಮೀರಿ ನಿಂತುಹೋದರೆ, ಟೆಲಿವಿಷನ್ ಚಾನೆಲ್‌ಗಳ ವಿತರಕರು ವಿತರಕ ರಿಟೇಲ್ ಬೆಲೆಯ ಪ್ರಮಾಣಕ್ಕನುಗುಣವಾಗಿ ಸಬ್‌ಸ್ಕ್ರಿಪ್ಶನ್ ಶುಲ್ಕಗಳನ್ನು ಮತ್ತು ಅಡ್ಡಿ ಉಂಟಾದ ಪೂರ್ತಿ ಅವಧಿಗೆ ಅಂತಹ ಚಾನೆಲ್‌ಗಳ ನೆಟ್ವರ್ಕ್ ಕೆಪ್ಯಾಸಿಟಿ ಫೀಯನ್ನು ಕಡಿಮೆ ಮಾಡಬೇಕು:

ಸಬ್‌ಸ್ಕ್ರೈಬರ್‌ಗಳು ದೂರನ್ನು ನೋಂದಾಯಿಸಿದ ಸಮಯದಿಂದ ಅಡ್ಡಿಯುಂಟಾದ ಸಮಯವನ್ನು ಲೆಕ್ಕ ಹಾಕಲಾಗುವುದು:

ನೈಸರ್ಗಿಕ ವಿಕೋಪಗಳಿಂದ ಉಂಟಾದ ಅಡೆತಡೆಗೆ ಈ ಉಪ-ನಿಯಮಾವಳಿಯಲ್ಲಿ ಒಳಗೊಂಡಿರುವ ಯಾವುದೂ ಅನ್ವಯಿಸುವುದಿಲ್ಲ.

ಸಬ್‌ಸ್ಕ್ರೈಬರ್ ಲಾಕಿನ್ ಅವಧಿಗೆ ಟೆಲಿವಿಷನ್ನಿನ ಪ್ರಸಾರ ಸೇವೆಗಳನ್ನು ಪಡೆದುಕೊಂಡಿದ್ದರೆ ಅಥವಾ ಟೆಲಿವಿಷನ್ ಚಾನಲ್‌ಗಳ ವಿತರಕರು ಒದಗಿಸಿದ ಯಾವುದೇ ಯೋಜನೆಯ ಮುಂದುವರಿಕೆ ಭಾಗವಾಗಿ ಸಬ್‌ಸ್ಕ್ರೈಬರ್ ಟೆಲಿವಿಷನ್ನಿನ ಪ್ರಸಾರ ಸೇವೆಗಳ ಸಬ್‌ಸ್ಕ್ರಿಪ್ಶನ್ ಶುಲ್ಕಗಳನ್ನು ನಿರ್ದಿಷ್ಟ ಅವಧಿಗೆ ಮುಂಗಡವಾಗಿ ಪಾವತಿಸಿದ್ದಲ್ಲಿ, ವಿತರಕರು ಸಬ್‌ಸ್ಕ್ರಿಪ್ಶನ್ ಶುಲ್ಕಗಳಲ್ಲಿ ಯಾವುದೇ ಏರಿಕೆ ಮಾಡದಂತೆ ಮತ್ತು ಸಬ್‌ಸ್ಕ್ರಿಪ್ಶನ್ ನಿಯಮಾವಳಿಗಳನ್ನು ಸಬ್‌ಸ್ಕ್ರೈಬರ್‌ಗೆ ಅನಾನುಕೂಲವಾಗುವ ರೀತಿಯಲ್ಲಿ ಬದಲಾಯಿಸದಂತೆ ಅಂತಹ ಸೇವೆಗಳನ್ನು ಅಷ್ಟು ಅವಧಿಗೆ ಸಬ್‌ಸ್ಕ್ರೈಬರ್‌ಗಳಿಗೆ ಒದಗಿಸುವುದನ್ನು ಮುಂದುವರೆಸುತ್ತಾರೆ.

ಡಿ. ಟೆಲಿವಿಷನ್ನಿಗೆ ಸಂಬಂಧಿಸಿದ ಪ್ರಸಾರ ಸೇವೆಗಳ ಸಂಪರ್ಕ ಕಡಿತ.—

(1) ಟೆಲಿವಿಷನ್ ಚಾನೆಲ್‌ಗಳ ಪ್ರತಿ ವಿತರಕರು ಸಬ್‌ಸ್ಕ್ರೈಬರ್‌ಗಳ ಮನವಿಯ ಮೇರೆಗೆ, ಸಬ್‌ಸ್ಕ್ರೈಬರ್‌ಗಳ ಸೂಚನೆಯ ದಿನಾಂಕದಿಂದ ಅಂತಹ ಸಬ್‌ಸ್ಕ್ರೈಬರ್‌ಗಳಿಗೆ ಟೆಲಿವಿಷನ್ನಿಗೆ ಸಂಬಂಧಿಸಿದ ಪ್ರಸಾರ ಸೇವೆಗಳ ಸಂಪರ್ಕವನ್ನು ಕಡಿತಗೊಳಿಸಿ ಮತ್ತು ಸಬ್‌ಸ್ಕ್ರೈಬರ್‌ಗಳ ಸಂಬಂಧಪಟ್ಟ ಡೆಪಾಸಿಟ್‌ಗಳನ್ನು ಮರುಪಾವತಿಸುತ್ತಾರೆ, ಇದು ಅಂತಹ ಸೇವೆಗಳನ್ನು ಒದಗಿಸುವುದಕ್ಕಾಗಿ ಸಬ್‌ಸ್ಕ್ರೈಬರ್‌ಗಳು ಮತ್ತು ವಿತರಕರು ಒಪ್ಪಿಕೊಂಡ ನಿಯಮ ಮತ್ತು ಷರತ್ತುಗಳ ನೆರವೇರಿಕೆಗೆ ಒಳಪಟ್ಟಿರುತ್ತದೆ: ಅದರ ನಂತರ ಏಳು ದಿನಗಳಲ್ಲಿ: ಸಬ್‌ಸ್ಕ್ರೈಬರ್‌ಗಳು ನಿಷ್ಕ್ರಿಯ ದಿನಾಂಕದಿಂದ ಕನಿಷ್ಠ ಹದಿನೈದು ದಿನಗಳ ಮುಂಚಿತವಾಗಿ ಸಂಪರ್ಕ ಕಡಿತಕ್ಕೆ ವಿನಂತಿಯನ್ನು ನೀಡಬೇಕು.

(2) ಟೆಲಿವಿಷನ್ ಚಾನೆಲ್‌ಗಳ ಯಾವುದೇ ವಿತರಕರು ಅಂತಹ ಸಂಪರ್ಕ ಕಡಿತಕ್ಕಾಗಿ ಕಾರಣಗಳನ್ನು ಒದಗಿಸಿ ಕನಿಷ್ಠ ಹದಿನೈದು ದಿನಗಳ ಮುಂಚಿತವಾಗಿ ಸಬ್‌ಸ್ಕ್ರೈಬರ್‌ಗಳಿಗೆ ನೋಟಿಸ್ ನೀಡದೇ ಟೆಲಿವಿಷನ್ನಿಗೆ ಸಂಬಂಧಿಸಿದ ಪ್ರಸಾರ ಸೇವೆಗಳನ್ನು ಕಡಿತಗೊಳಿಸಬಾರದು ಮತ್ತು ಸಬ್‌ಸ್ಕ್ರೈಬರ್‌ಗಳಿಗೆ ಅಂತಹ ಸಂಪರ್ಕ ಕಡಿತದ ನೋಟೀಸ್ ನೀಡಿಕೆ ದಿನಾಂಕದಿಂದ 15 ದಿನಗಳ ಅವಧಿಯನ್ನು ಗಣನೆಗೆ ತೆಗೆದುಕೊಳ್ಳಬೇಕು.

(3) ಉಪನಿಯಂತ್ರಣ (2) ರಲ್ಲಿ ಉಲ್ಲೇಖಿಸಲ್ಪಡುವ ಟೆಲಿವಿಷನ್‌‌ಗೆ ಸಂಬಂಧಿಸಿದ ಪ್ರಸಾರ ಸೇವೆಗಳ ಸಂಪರ್ಕ ಕಡಿತವು ವಿತರಣೆದಾರರಿಂದ ಟೆಲಿವಿಷನ್ ಸ್ಕ್ರೀನಿನಲ್ಲಿ ಸ್ಕ್ರಾಲ್‌‌‌ಗಳನ್ನು ರನ್ನಿಂಗ್ ಮಾಡುವ ಮೂಲಕ ಮತ್ತು ಸಬ್‌ಸ್ಕ್ರೈಬರ್‌ನ ನೋಂದಾಯಿತ ಮೊಬೈಲ್‌‌ ನಂಬರಿಗೆ ಸಂಕ್ಷಿಪ್ತ ಮೆಸೇಜ್ ಸೇವೆ (ಎಸ್ಎಂಎಸ್) ಅನ್ನು ಕಳುಹಿಸುವ ಮೂಲಕ ಸಂವಹಿಸಲಾಗುತ್ತದೆ:

ಈ ಮೇಲೆ ತಿಳಿಸಿದ ಮಾದರಿಗಳಲ್ಲದೆ, ಇ-ಮೇಲ್, ಬಿ-ಮೇಲ್ ಮತ್ತು ಇತರ ಸೂಕ್ತ ವಿಧಾನಗಳ ಮೂಲಕ ಸಬ್‌ಸ್ಕ್ರೈಬರ್‌ಗಳಿಗೆ ನೋಟಿಸನ್ನು ತಿಳಿಸುವ ಇತರ ವಿಧಾನಗಳನ್ನು ಬಳಸಲು ವಿತರಕರಿಗೆ ಅನುಮತಿ ಇರುತ್ತದೆ.
 

ಎ. ಪ್ರಿ-ಪೆಯ್ಡ್ ಬಿಲ್ಲಿಂಗ್ ಮತ್ತು ಪಾವತಿ.—
() ಪ್ರಿಪೆಯ್ಡ್ ಪಾವತಿಗಳ ಸಂದರ್ಭದಲ್ಲಿ ಟೆಲಿವಿಷನ್ ಚಾನೆಲ್‌ಗಳ ಪ್ರತಿ ವಿತರಕರು, ಸಬ್‌ಸ್ಕ್ರೈಬರ್‌ಗಳಿಗೆ ಅಂತಹ ಪಾವತಿಗಳನ್ನು ತಿಳಿಸುತ್ತಾರೆ ಮತ್ತು ಸಬ್‌ಸ್ಕ್ರೈಬರ್‌ ನಿರ್ವಹಣಾ ವ್ಯವಸ್ಥೆಯಲ್ಲಿ ಸರಿಯಾಗಿ ಅಪ್ಡೇಟ್ ಮಾಡುವುದನ್ನು ಖಚಿತಪಡಿಸಿಕೊಳ್ಳುತ್ತಾರೆ.
() ಸೇವೆಗಳನ್ನು ಸಕ್ರಿಯಗೊಳಿಸಿದ ದಿನಾಂಕದಿಂದ ಪ್ರಿಪೆಯ್ಡ್ ಪಾವತಿ ಸೇವೆ ಆಯ್ಕೆಯ ಬಿಲ್ಲಿಂಗ್ ಸೈಕಲ್ 0 ದಿನಗಳು ಆಗಿರುತ್ತದೆ.
(3) ಟೆಲಿವಿಷನ್ ಚಾನೆಲ್‌‌ಗಳ ಪ್ರತಿ ವಿತರಕರು ಅದರ ವೆಬ್‌‌ಸೈಟಿನಲ್ಲಿ, ಕನಿಷ್ಠ ಆರು ತಿಂಗಳ ಮುಂಚೆಯೇ, ಬಿಲ್ಲಿಂಗ್ ಮತ್ತು ಸಬ್‌ಸ್ಕ್ರೈಬರ್‌‌‌ಗಳ ಪಾವತಿಗಳನ್ನು ನಿರ್ವಹಿಸುತ್ತಾರೆ ಮತ್ತು ಸಬ್‌ಸ್ಕ್ರೈಬರ್‌‌‌ಗಳು ಅವರ ಅಕೌಂಟ್‌‌ಗಳಿಗೆ ಲಾಗಿನ್‌ ಆಗಲು ಅಕ್ಸೆಸ್‌ ಒದಗಿಸುತ್ತಾರೆ:
ಸಬ್‌ಸ್ಕ್ರೈಬರ್‌ಗಳ ಅಂತಹ ದಾಖಲೆಗಳು ಪ್ರತ್ಯೇಕವಾದ ಬಳಕೆಯ ವಿವರಗಳನ್ನು ಒಳಗೊಂಡಿರುತ್ತವೆ, —
(ಎ) ನೆಟ್ವರ್ಕ್ ಕೆಪ್ಯಾಸಿಟಿ ಫೀ,
(ಬಿ) ಗ್ರಾಹಕರ ಹತ್ತಿರದಲ್ಲಿರುವ ಉಪಕರಣಗಳಿಗೆ ಬಾಡಿಗೆ ಶುಲ್ಕಗಳು, ಯಾವುದಾದರೂ ಇದ್ದಲ್ಲಿ,
(ಸಿ) ಬಿಲ್ಲಿಂಗ್ ಸೈಕಲ್ ಅವಧಿಯಲ್ಲಿ ಸಬ್‌ಸ್ಕ್ರೈಬರ್‌ಗಳು ಸಬ್‌ಸ್ಕ್ರೈಬ್ ಮಾಡಿರುವ ಪೇ ಚಾನೆಲ್‌ಗಳ ಮತ್ತು ಪೇ ಚಾನೆಲ್‌ ಬೊಕೇಗಳ ಶುಲ್ಕಗಳು
(ಡಿ) ಈ ನಿಯಮಾವಳಿ ನಿಬಂಧನೆಗೆ ಅನುಸಾರವಾಗಿ ವಿಧಿಸಲಾದ ಯಾವುದೇ ಇತರ ಶುಲ್ಕಗಳು ಮತ್ತು,
(ಇ) ಅನ್ವಯಿಸುವ ಕಾನೂನುಗಳಿಗೆ ಅನುಗುಣವಾಗಿ ತೆರಿಗೆಗಳು.
() ಆತನ ಪ್ರಿಪೆಯ್ಡ್ ಅಕೌಂಟ್‌ನಲ್ಲಿ ಸಮತೋಲಿತ ಮೊತ್ತ ಲಭ್ಯವಿಲ್ಲದಿದ್ದಲ್ಲಿ ಪ್ರಿಪೆಯ್ಡ್ ಸಬ್‌ಸ್ಕ್ರೈಬರ್‌ಗಳ ಸೇವೆಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲು ಟೆಲಿವಿಷನ್ ಚಾನೆಲ್‌ಗಳ ವಿತರಕರಿಗೆ ಅನುಮತಿ ನೀಡಲಾಗುತ್ತದೆ.:
ಚಂದಾದಾರರ ಸೇವೆಗಳನ್ನು ನಿರಂತರವಾಗಿ ಮೂರು ತಿಂಗಳ ಕಾಲ ಅಮಾನತುಗೊಳಿಸಲಾಗುವುದು, ಅಂತಹ ಸಬ್‌ಸ್ಕ್ರೈಬರ್‌ಗಳನ್ನು ವಿತರಕರ ಸಕ್ರಿಯ ಸಬ್‌ಸ್ಕ್ರೈಬರ್‌ಗಳಾಗಿ ಪರಿಗಣಿಸಬಾರದು ಮತ್ತು ಸಬ್‌ಸ್ಕ್ರೈಬರ್‌ಗಳ ನಿರ್ವಹಣಾ ವ್ಯವಸ್ಥೆಯಿಂದ ಇಂತಹ ಸಬ್‌ಸ್ಕ್ರೈಬರ್‌ಗಳನ್ನು ನಿಷ್ಕ್ರಿಯಗೊಳಿಸಲು ವಿತರಕರಿಗೆ ಅನುಮತಿ ನೀಡಲಾಗುವುದು:
ಅಂತಹ ಸೇವೆಗಳು ಸತತವಾಗಿ ಮೂರು ತಿಂಗಳು ಮೀರಿದ ಅವಧಿಗೆ ಅಮಾನತುಗೊಂಡ ಸಂದರ್ಭದಲ್ಲಿ, ಸಬ್‌ಸ್ಕ್ರೈಬರ್‌ ಅಕೌಂಟ್‌ನಲ್ಲಿ ಬ್ಯಾಲೆನ್ಸ್ ಮೊತ್ತದ ರಿಚಾರ್ಜ್ ಮಾಡಿದ ನಂತರ ವಿತರಕರು ಸೇವೆಗಳನ್ನು ಇನ್ನೊಮ್ಮೆ ಆರಂಭಿಸುತ್ತಾರೆ ಮತ್ತು ಆ ವಿತರಕರು ಸೇವೆಗಳನ್ನು ಇನ್ನೊಮ್ಮೆ ಆರಂಭಿಸಲು ಸಬ್‌ಸ್ಕ್ರೈಬರ್‌ ಮರು-ಸಕ್ರಿಯಗೊಳಿಸುವ ಶುಲ್ಕವಾಗಿ ನೂರು ರೂಪಾಯಿಗಳನ್ನು ಮೀರದಂತೆ ಶುಲ್ಕವನ್ನು ವಿಧಿಸುತ್ತಾರೆ

5 ದೂರು ಪರಿಹಾರಕ್ಕಾಗಿ ಕಾರ್ಯವಿಧಾನ ಮತ್ತು ಮಾನದಂಡ:
ಗ್ರಾಹಕ ಸಹಾಯ ಕೇಂದ್ರದಿಂದ ದೂರುಗಳನ್ನು ನಿರ್ವಹಿಸುವುದು.— (1) ಟೆಲಿವಿಷನ್‌ ಚಾನೆಲ್‌ಗಳ ಪ್ರತಿ ವಿತರಕರು ಗ್ರಾಹಕ ಸಹಾಯ ಕೇಂದ್ರ ಸಬ್‌ಸ್ಕ್ರೈಬರ್‌ಗಳ ದೂರು ಸ್ವೀಕರಿಸಿದ ತಕ್ಷಣವೇ ಪ್ರತಿ ಬಾರಿಯೂ ಅಂತಹ ದೂರುಗಳನ್ನು ದಾಖಲಿಸುತ್ತದೆ ಮತ್ತು ಡಾಕೆಟ್ ನಂಬರ್‌ ಎಂದು ಕರೆಯಲ್ಪಡುವ ವಿಶೇಷ ನಂಬರ್‌ ಅನ್ನು ನಿಯೋಜಿಸುತ್ತದೆ:
ಪ್ರಾಧಿಕಾರವು ಅಂತಹ ಡಾಕೆಟ್ ನಂಬರಿಗೆ ಒಂದು ಫಾರ್ಮ್ಯಾಟನ್ನು ಅಗತ್ಯವಿದ್ದಲ್ಲಿ ಸೂಚಿಸಬಹುದು.
(2) ಟೆಲಿವಿಷನ್‌ ಚಾನೆಲ್‌ಗಳ ಪ್ರತಿ ವಿತರಕರು ಏನು ಖಚಿತಪಡಿಸಿಕೊಳ್ಳುತ್ತದೆಂದರೆ, ಗ್ರಾಹಕರ ಸೇವಾ ಕೇಂದ್ರವು-
(ಎ) ದೂರು ನೋಂದಾಯಿಸಿಕೊಳ್ಳುವ ಸಮಯದಲ್ಲಿ ಡಾಕೆಟ್ ನಂಬರ್, ದೂರಿನ ನೋಂದಣಿಯ ದಿನಾಂಕ ಮತ್ತು ಸಮಯ ಮತ್ತು ದೂರನ್ನು ಪರಿಹರಿಸಲು ಸಾಧ್ಯವಾಗುವ ಸಮಯವನ್ನು ಸಬ್‌ಸ್ಕ್ರೈಬರ್‌ಗಳಿಗೆ ತಿಳಿಸುವುದು
(ಬಿ) ದೂರನ್ನು ಪರಿಹರಿಸಿದ ಮೇಲೆ, ಸಬ್‌ಸ್ಕ್ರೈಬರ್‌ಗಳಿಗೆ ದೂರಿನ ಮೇಲೆ ತೆಗೆದುಕೊಂಡ ಕ್ರಮದ ವಿವರಗಳನ್ನು ಕೊಡುವುದು ಮತ್ತು ಒಂದು ವೇಳೆ ಸಬ್‌ಸ್ಕ್ರೈಬರ್‌ಗೆ ತೃಪ್ತಿ ಇಲ್ಲದಿದ್ದರೆ, ದೂರಿನ ಮುಂದಿನ ಪರಿಹಾರಕ್ಕಾಗಿ ನೋಡಲ್ ಅಧಿಕಾರಿಯ ಹೆಸರು ಮತ್ತು ಕಾಂಟಾಕ್ಟ್ ನಂಬರನ್ನು ಒದಗಿಸುವುದು.
ದೂರಿನ ಪರಿಹಾರಕ್ಕಾಗಿ ಸಮಯದ ಮಿತಿ.— ಟೆಲಿವಿಷನ್‌ ಚಾನೆಲ್‌ಗಳ ಪ್ರತಿ ವಿತರಕರು ಸಬ್‌ಸ್ಕ್ರೈಬರ್‌ಗಳ ದೂರುಗಳ ಪರಿಹಾರಕ್ಕಾಗಿ ಕೆಳಗಿನ ಸಮಯ ಮಿತಿಯನ್ನು ಅನುಸರಿಸಬೇಕು-
(ಎ) ದೂರು ಸ್ವೀಕರಿಸಿದ ಎಂಟು ಗಂಟೆಗಳೊಳಗೆ ಎಲ್ಲಾ ದೂರುಗಳಿಗೂ ಪ್ರತಿಕ್ರಿಯೆ ನೀಡಬೇಕು:
ಆಫೀಸ್ ಕೆಲಸದ ಸಮಯದ ನಂತರ ಸ್ವೀಕರಿಸಿದ ದೂರುಗಳಿಗೆ ಮುಂದಿನ ಕೆಲಸದ ದಿನದೊಳಗೆ ಪ್ರತಿಕ್ರಿಯಿ ನೀಡಬೇಕು;
(ಬಿ) ಸ್ವೀಕರಿಸಿದ ಎಲ್ಲಾ 'ಸಿಗ್ನಲ್ ಇಲ್ಲ' ದೂರುಗಳಲ್ಲಿ ಕನಿಷ್ಠ ತೊಂಬತ್ತು ಪ್ರತಿಶತದಷ್ಟನ್ನು ಪರಿಹರಿಸುವುದು ಮತ್ತು ಅಂತಹ ದೂರು ಪಡೆದ 24 ಗಂಟೆಗಳೊಳಗೆ ಸಿಗ್ನಲನ್ನು ರಿಸ್ಟೋರ್‌ ಮಾಡುವುದು
(ಸಿ) ಬಿಲ್ಲಿಂಗ್‌ಗೆ ಸಂಬಂಧಿಸಿದ ಎಲ್ಲಾ ದೂರುಗಳನ್ನು ಸಬ್‌ಸ್ಕ್ರೈಬರ್‌ಗಳು ದೂರು ಸಲ್ಲಿಸಿದ ಏಳು ದಿನಗಳೊಳಗೆ ಪರಿಹರಿಸುವುದು, ಯಾವುದಾದರೂ ರಿಫಂಡ್ ಇದ್ದಲ್ಲಿ, ದೂರು ಪಡೆದ 30 ದಿನಗಳ ಒಳಗೆ ಸಬ್‌ಸ್ಕ್ರೈಬರ್‌ಗಳಿಗೆ ಸಂದಾಯ ಮಾಡುವುದು;
(ಡಿ) ಅಧಿನಿಯಮ (ಬಿ) ಮತ್ತು ಅಧಿನಿಯಮ (ಸಿ) ಅಡಿಯಲ್ಲಿ ಒಳಗೊಳ್ಳದ ಎಲ್ಲಾ ಇತರ ದೂರುಗಳಲ್ಲಿ ಕನಿಷ್ಠ 90% ದೂರುಗಳನ್ನು ಸ್ವೀಕರಿಸಿದ ನಲವತ್ತೆಂಟು ಗಂಟೆಗಳೊಳಗೆ ಪರಿಹರಿಸಬೇಕು;
(ಇ) ಅಧಿನಿಯಮ (ಸಿ) ದಲ್ಲಿ ಉಲ್ಲೇಖಿಸಲಾದ ಬಿಲ್ಲಿಂಗ್‌ ಸಂಬಂಧಿತ ದೂರುಗಳನ್ನು ಹೊರತುಪಡಿಸಿ ಯಾವುದೇ ದೂರನ್ನು ಎಪ್ಪತ್ತೆರಡು ಗಂಟೆಗಿಂತಲೂ ಅಧಿಕ ಸಮಯದವರೆಗೆ ಪರಿಹರಿಸದೆ ಇಡಬಾರದು