(1) ಗ್ರಾಹಕರಿಗೆ ಕನೆಕ್ಷನ್ ಒದಗಿಸುವ ಸಮಯದಲ್ಲಿ ಟೆಲಿವಿಷನ್ನಿನ ಚಾನೆಲ್‌ಗಳ ಪ್ರತಿ ವಿತರಕರು ಸೇವೆಗಳ ಸಂಪೂರ್ಣ ವಿವರಗಳನ್ನು ಈ ಮುಂದಿನವುಗಳನ್ನು ಒಳಗೊಂಡು ಆದರೆ ಅವಕ್ಕೆ ಸೀಮಿತವಾಗದೇ, ಅನ್ವಯವಾಗುವ ಪ್ರತಿ ತಿಂಗಳ ಗರಿಷ್ಠ ರಿಟೇಲ್ ಬೆಲೆ, ಅ-ಲಾ-ಕಾರ್ಟ್ ಚಾನೆಲ್‌ಗಳ ಅಥವಾ ಬೊಕೇಗಳ ಪ್ರತಿ ತಿಂಗಳ ವಿತರಕ ರಿಟೇಲ್ ಬೆಲೆ, ಕಸ್ಟಮರ್ ಪ್ರಿಮೈಸ್ ಇಕ್ವಿಪ್ಮೆಂಟಿನ ಪ್ರತಿ ತಿಂಗಳ ನೆಟ್ವರ್ಕ್ ಕೆಪ್ಯಾಸಿಟಿ ಫೀ, ಭದ್ರತಾ ಠೇವಣಿ, ಬಾಡಿಗೆ ಮೊತ್ತ, ಗ್ಯಾರಂಟಿ/ವಾರಂಟಿ, ನಿರ್ವಹಣಾ ನಿಬಂಧನೆ, ಕಸ್ಟಮರ್ ಪ್ರಿಮೈಸ್ ಇಕ್ವಿಪ್ಮೆಂಟಿನ ಮಾಲೀಕತ್ವಗಳ ಬಗ್ಗೆ ತಿಳಿಸಬೇಕು.
2) ಪ್ರತಿ ವಿತರಕರು ಸರಿಯಾಗಿ ತುಂಬಿದ ಕನ್ಸೂಮರ್ ಅಪ್ಲಿಕೇಶನ್ ಫಾರ್ಮ್ (ಶೆಡ್ಯೂಲ್ 1) ಅನ್ನು ಪಡೆದ ನಂತರ ಟೆಲಿವಿಷನ್ನಿಗೆ ಸಂಬಂಧಿಸಿದ ಪ್ರಸಾರ ಸೇವೆಗಳನ್ನು ಒದಗಿಸುತ್ತಾರೆ ಮತ್ತು ಗ್ರಾಹಕರಿಗೆ ಅದರ ಒಂದು ಪ್ರತಿಯನ್ನು ಕೊಡುತ್ತಾರೆ.
(3) ಟೆಲಿವಿಷನ್ ಚಾನೆಲ್‌ಗಳ ಪ್ರತಿ ವಿತರಕರು ಸಬ್‌ಸ್ಕ್ರೈಬರ್ ಮ್ಯಾನೇಜ್ಮೆಂಟ್ ಸಿಸ್ಟಮನ್ನು ಪಾಲಿಸಿ, ವಿಶೇಷ ಗುರುತು ನಂಬರನ್ನು ಪ್ರತಿ ಸಬ್‌ಸ್ಕ್ರೈಬರ್‌ಗಳಿಗೆ ಒದಗಿಸುತ್ತಾರೆ ಮತ್ತು ಅದನ್ನು ನೋಂದಾಯಿತ ಮೊಬೈಲ್ ನಂಬರಿಗೆ ಎಸ್ಎಂಎಸ್ ಮೂಲಕ ಮತ್ತು ಇತರ ಸಂವಹನ ಮಾಧ್ಯಮಗಳಾದ ಇಮೇಲ್, ಬಿಮೇಲ್, ತಿಂಗಳ ಬಿಲ್ ಅಥವಾ ಪಾವತಿ ರಶೀದಿ ಅಥವಾ ಯಾವುದೇ ಸೂಕ್ತ ಮಾಧ್ಯಮಗಳನ್ನು ಬಳಸಿ ತಿಳಿಸುತ್ತಾರೆ.
(4) ಅಂತಹ ಸಬ್‌ಸ್ಕ್ರೈಬರ್‌ನ ಗ್ರಾಹಕ ಅಪ್ಲಿಕೇಶನ್ ಫಾರ್ಮ್ ವಿವರಗಳನ್ನು ಸಬ್‌ಸ್ಕ್ರೈಬರ್ ನಿರ್ವಹಣಾ ವ್ಯವಸ್ಥೆಗೆ ಪ್ರವೇಶಿಸಿದ ಬಳಿಕ ಮಾತ್ರ ಟೆಲಿವಿಷನ್ ಚಾನೆಲ್‌ಗಳ ವಿತರಕರು ಸಬ್‌ಸ್ಕ್ರೈಬರ್‌ಗಳಿಗೆ ಟಿವಿಗೆ ಸಂಬಂಧಿಸಿದ ಪ್ರಸಾರ ಸೇವೆಗಳನ್ನು ಸಕ್ರಿಯಗೊಳಿಸಬೇಕು.:
(5) ಅಂತಹ ಸಬ್‌ಸ್ಕ್ರೈಬರ್‌ಗಳ ಗ್ರಾಹಕ ಅಪ್ಲಿಕೇಶನ್ ಫಾರ್ಮ್ ವಿವರಗಳನ್ನು ಸಬ್‌ಸ್ಕ್ರೈಬರ್‌ಗಳ ನಿರ್ವಹಣಾ ವ್ಯವಸ್ಥೆಗೆ ಪ್ರವೇಶಿಸಿದ ಬಳಿಕ ಮಾತ್ರ ಟೆಲಿವಿಷನ್ ಚಾನೆಲ್‌ಗಳ ವಿತರಕರು ಸಬ್‌ಸ್ಕ್ರೈಬರ್‌ಗಳಿಗೆ ಟಿವಿಗೆ ಸಂಬಂಧಿಸಿದ ಪ್ರಸಾರ ಸೇವೆಗಳನ್ನು ಸಕ್ರಿಯಗೊಳಿಸಬೇಕು.:
ಟೆಲಿವಿಷನ್‌ಗೆ ಸಂಬಂಧಿಸಿದ ಪ್ರಸಾರ ಸೇವೆಗಳಿಗೆ ಶುಲ್ಕವನ್ನು ಅಂತಹ ಸೇವೆಗಳನ್ನು ಸಕ್ರಿಯಗೊಳಿಸುವ ದಿನಾಂಕದಿಂದ ಸಬ್‌ಸ್ಕ್ರೈಬರ್‌ಗಳು ಪಾವತಿಸಬೇಕಾಗುತ್ತದೆ.
(6) ಟೆಲಿವಿಷನ್ ವಾಹಿನಿಯ ವಿತರಕರು ಟೆಲಿವಿಷನ್ನಿಗೆ ಸಂಬಂಧಿಸಿದ ಪ್ರಸಾರ ಸೇವೆಗಳನ್ನು ಒದಗಿಸಲು ಹೊಸ ಕನೆಕ್ಷನನ್ನು ಕೊಡಲು ಒಂದು-ಬಾರಿಯ ಇನ್ಸ್ಟಾಲೇಶನ್ ಶುಲ್ಕವನ್ನು ಮುನ್ನೂರೈವತ್ತು ರೂಪಾಯಿಗಳು ಮೀರದಂತೆ ವಿಧಿಸಬಹುದು.
(7) ಟೆಲಿವಿಷನ್ ವಾಹಿನಿಯ ವಿತರಕರು ಟೆಲಿವಿಷನ್ನಿಗೆ ಸಂಬಂಧಿಸಿದ ಪ್ರಸಾರ ಸೇವೆಗಳ ಸಕ್ರಿಯಗೊಳಿಸಲು ಒಂದು-ಬಾರಿ ಸಕ್ರಿಯತಾ ಶುಲ್ಕವಾಗಿ ಒಂದುನೂರು ರೂಪಾಯಿಗಳನ್ನು ಮೀರದಂತೆ ವಿಧಿಸಬಹುದು.