• ಸ್ವಸಹಾಯ

ಕನೆಕ್ಷನ್ನಿನ ಸ್ಥಳ ಬದಲಾವಣೆ

ಒಂದುವೇಳೆ ಸಬ್‌ಸ್ಕ್ರೈಬರ್ ಬೇರೊಂದು ಸ್ಥಳಕ್ಕೆ ತನ್ನ ಕನೆಕ್ಷನನ್ನು ಸ್ಥಳ ಬದಲಾವಣೆ ಮಾಡಲು ಬಯಸಿದರೆ, ಟೆಲಿವಿಷನ್ ಚಾನೆಲ್‌ಗಳ ವಿತರಕರು ತಾಂತ್ರಿಕ ಮತ್ತು ಕಾರ್ಯಕಾರಿ ಸಾಧ್ಯತೆಗೆ ಒಳಪಟ್ಟು, ಆ ಕೋರಿಕೆ ಬಂದ 7 ದಿನಗಳ ಒಳಗೆ ಕನೆಕ್ಷನನ್ನು ಸ್ಥಳಾಂತರಿಸಬೇಕು:

ಅಂತಹ ಸಬ್‌ಸ್ಕ್ರೈಬರ್‌ಗೆ ಶುಲ್ಕ ವಿಧಿಸಲು ವಿತರಕರಿಗೆ ಅನುಮತಿ ನೀಡಲಾಗುವುದು -
(i) ಒಂದು ವೇಳೆ ಸ್ಥಳಾಂತರದ ಕಾರ್ಯವು ಹಳೆಯ ಸ್ಥಳದಿಂದ ಗ್ರಾಹಕರ ಆವರಣದ ಉಪಕರಣಗಳ ಹೊರಾಂಗಣ ಉಪಕರಣಗಳನ್ನು ತೆಗೆಯುವುದು ಮತ್ತು ಹೊಸ ಸ್ಥಳದಲ್ಲಿ ಪುನಃ ಸ್ಥಾಪಿಸುವುದಾಗಿದ್ದರೆ ವಿತರಕರಿಂದ ಸೂಚಿಸಲಾದ ಮೊತ್ತವು ಎರಡು ಪಟ್ಟು ಇನ್ಸ್ಟಾಲ್‌ ಚಾರ್ಜಿನ ಮೊತ್ತವನ್ನು ಮೀರದಂತಿರುತ್ತದೆ ಅಥವಾ

(ii) ಇಂತಹ ಸ್ಥಳಾಂತರದ ಕೆಲಸವು ಹಳೆಯ ಸ್ಥಳದಿಂದ ಗ್ರಾಹಕ ಆವರಣದ ಉಪಕರಣಗಳ ಹೊರಾಂಗಣ ಸಾಧನಗಳನ್ನು ತೆಗೆಯುವುದನ್ನು ಒಳಗೊಳ್ಳದಿದ್ದರೆ, ವಿತರಕರಿಂದ ಸೂಚಿಸಲಾದ ಮೊತ್ತವು ಇನ್‌ಸ್ಟಾಲೇಶನ್‌ ಶುಲ್ಕವನ್ನು ಮೀರದಂತಿರುತ್ತದೆ.